
(M)
ಅವರಿವರ ಜೊತೆ ಸೇರದೆ..
ಅವರಿವರ ಮಾತು ಕೇಳದೆ..
ಗೆಳತಿಯರ ಜೊತೆ ಹೋಗದೆ..
ಪರಿಚಿತರ ಬಳಿ ನಿಲ್ಲದೆ..
ನನ್ನನ್ನಷ್ಟೇ.. ಸಾಯೋ ಹಾಗೆ ನೀನು ಪ್ರೀತಿಸು..
ನಿನ್ನ ಎಲ್ಲಾ.. ಆಸೆಗಳ ಸಾಲಿನಲ್ಲಿ..
ಎಂದೂ ನನ್ನ ಮುಂದೆ ಇರಿಸು
ಅವರಿವರ ಜೊತೆ ಸೇರದೆ..
ಅವರಿವರ ಮಾತು ಕೇಳದೆ..
(F)
ನೀ ಹೇಳಿದ್ರೆ ನಾ ಕೇಳುವೆ..
ಮಾತು ಒಂದೇ ಆಗಲಿ..
ನೀನಾಡುವ ಸುಳ್ಳಲ್ಲಿಯೂ ನಾನೇ ಇರಲಿ..
ನೀ ಸೋತರೂ.. ನಾ ಸೋತರೂ..
ಪ್ರೀತಿ ಎಂದೂ ಗೆಲ್ಲಲಿ..
ನೀನ್ನೆನ್ನುವಾ ನಾನ್ನೆನ್ನುವಾ ಮಾತಿನಲಿ..
❤ ❤ Music ❤ ❤
(M)
ನಗು ಎಲ್ಲವನ್ನಾ ನನಗಾಗಿ ಕೂಡಿಸು..
ಮುನಿಸನ್ನ ದೂರಕ್ಕೆ ತಳ್ಳಿ ಬಿಡು..
ಮನಸಿನೊಳಗೆ ಮರೆಮಾಚಿದ ಎಲ್ಲಾ..
ಗುಟ್ಟುಗಳನ್ನಾ ನನ್ನ ಮುಂದೆ ತೆರೆಯಬೇಕು..
(F)
ಏನನ್ನೋ ಹುಡುಕುವಾ ಹೊತ್ತಲ್ಲಿ..
ನನ್ನ ನಗು ನಿನಗೆ ಸಿಗಲಿ..
ಯಾರನ್ನೂ ಕರೆಯುವ ಕ್ಷಣದಲ್ಲಿ..
ನನ್ನ ಹೆಸರೇ ಮೊದಲು ಬರಲಿ..
(M)
ಬೇರೇನೂ ಯೋಚಿಸದೆ ನನ್ನ ಪ್ರೀತಿಸು..
ನಿನ್ನ ಎಲ್ಲಾ… ಆಸೆಗಳ ಸಾಲಿನಲ್ಲಿ..
ಎಂದೂ ನನ್ನ ಮುಂದೆ ಇರಿಸು..
❤ ❤ Music ❤ ❤
(F)
ನೀ ಹೇಳಿದ್ರೆ ನಾ ಕೇಳುವೆ..
ಮಾತು ಒಂದೇ ಆಗಲಿ..
ನೀನಾಡುವ ಸುಳ್ಳಲ್ಲಿಯೂ ನಾನೇ ಇರಲಿ..
ನೀ ಸೋತರೂ.. ನಾ ಸೋತರೂ..
ಪ್ರೀತಿ ಎಂದೂ ಗೆಲ್ಲಲಿ..
ನೀನ್ನೆನ್ನುವಾ ನಾನ್ನೆನ್ನುವಾ ಮಾತಿನಲಿ..
(M)
ನೆರಳಾಗಿ ಹಗಲಿಡೀ ನೀನು ಬೇಕು..
ಕನಸಾಗಿ ಇರುಳಿಡೀ ಕಾಡಬೇಕು..
ಬದುಕಿನ ಗುರಿಯಂತೆ ನನ್ನ ಸೇರಿ..
ಅನುರಾಗ ಪ್ರತಿಕ್ಷಣ ನೀಡಿದ್ರೆ ಸಾಕು..
(F)
ಮುಂಜಾನೆ ಬೆಳಕಲ್ಲಿ ನೆನಪಿಸು..
ರಾತ್ರಿ ಕನಸಲ್ಲಿ ನನ್ನ ಹರಿಸು..
ಜಗವೆಲ್ಲ ಹೊಗಳುವಾ ಹೊತ್ತಲ್ಲಿ..
ಮನಸ್ಸಲ್ಲಿ ನನ್ನನ್ನೇ ಉಳಿಸು..
(M)
ದೇವರನ್ನು ಬೇಡುವಾಗ ನನ್ನ ಜಪಿಸು..
ನಿನ್ನ ಎಲ್ಲಾ… ಆಸೆಗಳ ಸಾಲಿನಲ್ಲಿ..
ಎಂದೂ ನನ್ನ ಮುಂದೆ ಇರಿಸು..
(M)
ಅವರಿವರ ಜೊತೆ ಸೇರದೆ..
ಅವರಿವರ ಮಾತು ಕೇಳದೆ..
